Telegram Join My Telegram WhatsApp Join My WhatsApp

Iran Leader Mojtaba Khamenei: ವೈಮಾನಿಕ ದಾಳಿಯಲ್ಲಿ ಕಾಲು ಕಟ್? ಕೋಮಾದಲ್ಲಿ ಇರಾನ್ ನೂತನ ಪರಮೋಚ್ಛ ನಾಯಕ ಎಂಬ ವರದಿ

ಇರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಅಮೆರಿಕಾ, ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ವಿಶ್ವದ ಗಮನ ಸೆಳೆಯುತ್ತಿರುವ ನಡುವೆಯೇ, ಇರಾನ್‌ನ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಅಚ್ಚರಿಯ ವರದಿಗಳು ಹರಿದಾಡುತ್ತಿವೆ

ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಟೆಹ್ರಾನ್‌ನಲ್ಲಿ ನಡೆದ ಭಾರೀ ವೈಮಾನಿಕ ದಾಳಿಯ ವೇಳೆ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಅವರ ಒಂದು ಕಾಲು ಕಟ್ ಆಗಿದ್ದು, ಅವರು ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿವೆ.

ವರದಿಗಳ ಪ್ರಕಾರ ಗಂಭೀರ ಗಾಯಗಳ ಹಿನ್ನೆಲೆ ಅವರನ್ನು ತುರ್ತುವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಕಟ್ಟುನಿಟ್ಟಿನ ನಿಗಾದಲ್ಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ

ಆದರೆ ಈ ಎಲ್ಲ ಸುದ್ದಿಗಳನ್ನು ಇರಾನ್ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಮೊಜ್ತಬಾ ಖಮೇನಿ ಸುರಕ್ಷಿತರಾಗಿದ್ದು, ದೇಶದ ಆಡಳಿತ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳು ಸುಳ್ಳು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಇದರ ನಡುವೆಯೇ, ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಸಂದೇಶವನ್ನು ಸ್ವತಃ ನೀಡದೆ ಸರ್ಕಾರದ ಮಾಧ್ಯಮದ ಮೂಲಕ ಪ್ರಕಟಿಸಿರುವುದು ಕೂಡಾ ವದಂತಿಗಳಿಗೆ ಮತ್ತಷ್ಟು ಇಂಬು ನೀಡುತ್ತಿದೆ.

ಮೊಜ್ತಬಾ ಖಮೇನಿ ಕಾಲು ಕಳೆದುಕೊಂಡಿದ್ದಾರೆ ಮತ್ತು ಕೋಮಾದಲ್ಲಿದ್ದಾರೆ ಎಂಬ ವರದಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದರೂ, ಈ ಕುರಿತು ಇರಾನ್ ಸರ್ಕಾರದಿಂದ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ. ಅವರ ಆರೋಗ್ಯದ ನಿಖರ ಮಾಹಿತಿ ಇನ್ನೂ ಸ್ಪಷ್ಟವಾಗಬೇಕಿದೆ.

Leave a Comment