ಮಾರ್ಚ್ 15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು–ಧಾರವಾಡ ಹಾಗೂ ಬೆಳಗಾವಿ–ಬೆಂಗಳೂರು ಮಾರ್ಗದ ರೈಲುಗಳಿಗೆ ಹೊಸ ಟೈಮಿಂಗ್ ಪ್ರಕಟಿಸಲಾಗಿದೆ. ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು: ಕರ್ನಾಟಕದ ಪ್ರಯಾಣಿಕರಿಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಕೆಲವು ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಮಾರ್ಚ್ 15ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಬದಲಾವಣೆಯು ಮುಖ್ಯವಾಗಿ ಬೆಂಗಳೂರು–ಧಾರವಾಡ ಮತ್ತು ಬೆಳಗಾವಿ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳಿಗೆ ಅನ್ವಯವಾಗಲಿದೆ.
🚆 KSR ಬೆಂಗಳೂರು – ಧಾರವಾಡ (Train No. 20661)
- ದಾವಣಗೆರೆ: ಬೆಳಿಗ್ಗೆ 9.30 / 9.32
- ಹಾವೇರಿ: ಬೆಳಿಗ್ಗೆ 10.20 / 10.22
- ಹುಬ್ಬಳ್ಳಿ: ಬೆಳಿಗ್ಗೆ 11.15 / 11.20
- 🚆 ಧಾರವಾಡ – KSR ಬೆಂಗಳೂರು (Train No. 20662)
- ಹಾವೇರಿ: ಮಧ್ಯಾಹ್ನ 2.48 / 2.50
- ದಾವಣಗೆರೆ: ಮಧ್ಯಾಹ್ನ 3.33 / 3.35
- ಯಶವಂತಪುರ: ಸಂಜೆ 7.21 ಸುಮಾರಿಗೆ ಆಗಮನ
ರೈಲ್ವೆ ಇಲಾಖೆ ಪ್ರಕಟಿಸಿರುವ ಈ ಹೊಸ ವೇಳಾಪಟ್ಟಿಯನ್ನು ಪ್ರಯಾಣಿಕರು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಸೂಚಿಸಲಾಗಿದೆ.