ಶುಕ್ರವಾರದ ವಹಿವಾಟಿಗೆ ಮಾರುತಿ ಸುಜುಕಿ, Indigo ಸೇರಿ ಈ 5 ಷೇರುಗಳ ಶಿಫಾರಸು; ಬ್ರೋಕರೇಜ್‌ಗಳಿಂದ ಖರೀದಿ ರೇಟಿಂಗ್
Authored by ಬಾನುಪ್ರಸಾದ ಕೆ ಎನ್ | The Economic Times Kannada | Updated: 6 Mar 2026, 11:33 am IST
Stock recommendation: ನಿನ್ನೆ ಗುರುವಾರದಂದು ಚೇತರಿಕೆಯೊಂದಿಗೆ ಮುಚ್ಚಿದ್ದ ಭಾರತೀಯ ಷೇರು ಮಾರುಕಟ್ಟೆ, ಇಂದು ಶುಕ್ರವಾರ ಮತ್ತೆ ರೆಡ್ ಮಾರ್ಕ್‌ಗೆ ತಿರುಗಿದೆ. ಈ ಸಂದರ್ಭದಲ್ಲಿ ಜಾಗತಿಕ ಬ್ರೋಕರೇಜ್ ಸಂಸ್ಥೆಗಳು 5 ಗುಣಮಟ್ಟದ ಷೇರುಗಳ ಕುರಿತು ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಪೇಂಟ್ ಕಂಪನಿಗಳ ಟಾರ್ಗೆಟ್ ಬೆಲೆಗಳನ್ನು ಕಡಿತಗೊಳಿಸಲಾಗಿದ್ದರೂ, M&M ಮತ್ತು ಶ್ರೀರಾಮ್ ಫೈನಾನ್ಸ್‌ನ ಟಾರ್ಗೆಟ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
ಮೂರು ದಿನಗಳ ಕುಸಿತದ ನಂತರ ನಿನ್ನೆ ಗುರವಾರ ಸೆನ್ಸೆಕ್ಸ್ 900 ಪಾಯಿಂಟ್ಸ್ ಏರಿಕೆ ಕಂಡಿದೆ. ನಿಫ್ಟಿ ಕೂಡ 285 ಪಾಯಿಂಟ್ಸ್ ಏರಿಕೆ ದಾಖಲಿಸಿತ್ತು. ಇಂದರೆ, ಇಂದು ಶುಕ್ರವಾರದ ವಹಿವಾಟಿನಲ್ಲಿ ಮತ್ತೆ ರೆಡ್ ಮಾರ್ಕ್‌ಗೆ ತಿರುಗಿದೆ. ಇಂದು GIFT ನಿಫ್ಟಿ 185 ಅಂಕಗಳ ಕುಸಿತ ಕಾಣುತ್ತಿರುವುದು ಮಾರುಕಟ್ಟೆಯ ದುರ್ಬಲ ಆರಂಭದ ಮುನ್ಸೂಚನೆ ನೀಡುತ್ತಿದೆ. ಈ ನಡುವೆ ಜಾಗತಿಕ ಬ್ರೋಕರೇಜ್ ಸಂಸ್ಥೆಗಳು 10 ಪ್ರಮುಖ ಸ್ಟಾಕ್‌ಗಳ ಕುರಿತು ಹೊಸ ವರದಿ ನೀಡಿವೆ. ಪೇಂಟ್ ಕಂಪನಿಗಳ ಟಾರ್ಗೆಟ್ ಬೆಲೆ ಕಡಿತಗೊಳಿಸಿದ್ದರೆ, ಎಂ&ಎಂ ಮತ್ತು ಶ್ರೀರಾಮ್ ಫೈನಾನ್ಸ್‌ನ ಟಾರ್ಗೆಟ್ ಬೆಲೆಯನ್ನು ಹೆಚ್ಚಿಸಿವೆ.
Stocks to Buy and Sell
ಪ್ರಮುಖ ಸ್ಟಾಕ್‌ಗಳ ವಿವರ ಹೀಗಿದೆ:
1. ಆರ್ಕ್ಲಾ ಇಂಡಿಯಾ (Orkla India)
ಬ್ರೋಕರೇಜ್: ಸಿಟಿ (Citi)
ರೇಟಿಂಗ್: ಖರೀದಿ (BUY)
ಟಾರ್ಗೆಟ್ ಬೆಲೆ: ₹750
ಆಹಾರ ಉತ್ಪನ್ನಗಳ ಕಂಪನಿಯಾದ ಆರ್ಕ್ಲಾ ಇಂಡಿಯಾದ ಮೇಲೆ ಸಿಟಿ ಸಂಸ್ಥೆಯು ಹೊಸದಾಗಿ ಕವರೇಜ್ ಆರಂಭಿಸಿದ್ದು, ಪಾಸಿಟಿವ್ ರೇಟಿಂಗ್ ನೀಡಿದೆ.
2. ನೈಕಾ (Nykaa)
ಬ್ರೋಕರೇಜ್: ಮಕ್ವಾರಿ (Macquarie)
ರೇಟಿಂಗ್: ಅಂಡರ್ ಪರ್ಫಾರ್ಮ್ (Underperform)
ಟಾರ್ಗೆಟ್ ಬೆಲೆ: ₹150 ರಿಂದ ₹210ಕ್ಕೆ ಏರಿಕೆ
ಬ್ಯೂಟಿ ಸೆಕ್ಟರ್‌ನ ಬೆಳವಣಿಗೆ ದೀರ್ಘಕಾಲ ಉಳಿಯುವುದು ಕಷ್ಟ ಎಂದು ಬ್ರೋಕರೇಜ್ ಭಾವಿಸಿದೆ. ‘ಡಾಟ್ ಆಂಡ್ ಕೀ’ ಬ್ರ್ಯಾಂಡ್‌ನ ಯಶಸ್ಸನ್ನು ಇತರ ಬ್ರ್ಯಾಂಡ್‌ಗಳಲ್ಲಿ ಮರುಕಳಿಸುವುದು ನೈಕಾಗೆ ಸವಾಲಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
3. ಇಂಡಿಗೋ (Indigo)
ಬ್ರೋಕರೇಜ್: ಯುಬಿಎಸ್ (UBS)
ರೇಟಿಂಗ್: ಖರೀದಿ (BUY) – ರೇಟಿಂಗ್ ಉಳಿಸಿಕೊಂಡಿದೆ.
ಟಾರ್ಗೆಟ್ ಬೆಲೆ: ₹6170 ರಿಂದ ₹5480ಕ್ಕೆ ಇಳಿಕೆ
ಪ್ರಸ್ತುತ ನಡೆಯುತ್ತಿರುವ ಯುದ್ಧದ ಸಂಘರ್ಷಗಳು ವಿಮಾನಯಾನದ ಮೇಲೆ ಪರಿಣಾಮ ಬೀರಬಹುದು. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಕುಸಿತವು ಮಧ್ಯಮ ಅವಧಿಯಲ್ಲಿ ಕಂಪನಿಗೆ ಅಡ್ಡಿಯಾಗಬಹುದು ಎಂದು ಅಂದಾಜಿಸಲಾಗಿದೆ.
4. ಮಾರುತಿ ಸುಜುಕಿ (Maruti Suzuki)
ಬ್ರೋಕರೇಜ್: ಹೆಚ್‌ಎಸ್‌ಬಿಸಿ (HSBC)
ರೇಟಿಂಗ್: ಖರೀದಿ (BUY)
ಟಾರ್ಗೆಟ್ ಬೆಲೆ: ₹18000 ರಿಂದ ₹17400ಕ್ಕೆ ಇಳಿಕೆ
ಕಚ್ಚಾ ವಸ್ತುಗಳ (Commodity) ಬೆಲೆ ಶೇ. 20ರಷ್ಟು ಏರಿಕೆಯಾಗಿರುವುದು ಮಾರ್ಜಿನ್ ಮೇಲೆ ಒತ್ತಡ ಹೇರಬಹುದು. ಹೀಗಾಗಿ …