ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ Dhurandhar 2 ರಿಲೀಸ್ ಆದ್ಮೇಲೆ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ರಿಲೀಸ್ ಆದ ಮೊದಲ ದಿನವೇ ₹100 ಕೋಟಿ ಕಲೆಕ್ಷನ್ ದಾಟಿದ ಈ ಸಿನಿಮಾ, ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ.
ಮೂರು ದಿನಗಳಲ್ಲೇ ಈ ಸಿನಿಮಾ ₹300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಇನ್ನೂ ವಾರಾಂತ್ಯದ ಕಲೆಕ್ಷನ್‌ಗಳು ಎಷ್ಟು ಆಗಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
💥 OTT Release ಬಗ್ಗೆ Big Update!
ಇದೀಗ ಎಲ್ಲರಿಗೂ ಇರುವ ಪ್ರಶ್ನೆ — OTTನಲ್ಲಿ ಯಾವಾಗ ಬರುತ್ತೆ?
ಇತ್ತೀಚಿನ ವರದಿಗಳ ಪ್ರಕಾರ, ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು Jio Hotstar ಪಡೆದುಕೊಂಡಿದೆ ಎನ್ನಲಾಗಿದೆ. ಮೊದಲ ಭಾಗ Netflix ನಲ್ಲಿ ಬಂದಿದ್ದರೂ, ಈ ಬಾರಿ ಪ್ಲಾಟ್‌ಫಾರ್ಮ್ ಬದಲಾವಣೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಡಿಜಿಟಲ್ ಹಕ್ಕುಗಳು ಸುಮಾರು ₹150 ಕೋಟಿಗೆ ಮಾರಾಟವಾಗಿವೆ ಎಂಬ ಮಾಹಿತಿ ಕೂಡ ಹೊರಬಂದಿದೆ.
📅 ಯಾವಾಗ ನೋಡಬಹುದು?
ಇನ್ನೂ ಅಧಿಕೃತ OTT ರಿಲೀಸ್ ಡೇಟ್ ಘೋಷಣೆ ಆಗಿಲ್ಲ. ಆದರೆ ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ಥಿಯೇಟರ್ ರಿಲೀಸ್ ಆದ 45 ರಿಂದ 60 ದಿನಗಳ ನಂತರ OTTಗೆ ಬರುತ್ತವೆ.
ಆ ಲೆಕ್ಕದಲ್ಲಿ ನೋಡಿದ್ರೆ, ಜೂನ್ ಮಧ್ಯದಲ್ಲಿ ಅಥವಾ ಅದಾದ ಮೇಲೆ Dhurandhar 2 OTTನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ.
🎬 Star Cast & Crew
ಈ ಆಕ್ಷನ್ ಪ್ಯಾಕ್ ಸಿನಿಮಾ ನಿರ್ದೇಶನ ಮಾಡಿದ್ದಾರೆ ಆದಿತ್ಯ ಧರ್. ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದು, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಮಾಧವನ್ ಅವರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ