Telegram Join My Telegram WhatsApp Join My WhatsApp

Gold Rate Fall: ಮಾರ್ಚ್ ತಿಂಗಳ ಕನಿಷ್ಠಕ್ಕೆ ಇಳಿದ ಚಿನ್ನದ ಬೆಲೆ, ಬೆಳ್ಳಿ ದರದಲ್ಲೂ ಭಾರಿ ಕುಸಿತ

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಉಂಟಾದ ಏರಿಳಿತದ ನಡುವೆ ಭಾರತದಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಮಾರ್ಚ್ 16, 2026ರ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ದಾಖಲಾಗಿದ್ದು, ಈ ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ, ಅಂದರೆ ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 15,865 ರೂಪಾಯಿವರೆಗೆ ಏರಿಕೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯ ಅನಿಶ್ಚಿತತೆಗಳಿಂದಾಗಿ ದರದಲ್ಲಿ ಇಳಿಕೆ ಕಂಡುಬಂದಿದೆ.

ಇಂದಿನ ಚಿನ್ನದ ಬೆಲೆ ಎಷ್ಟು?

ಮಾರ್ಚ್ 16ರಂದು 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ 10 ಗ್ರಾಂಗೆ ಸುಮಾರು 490 ರೂಪಾಯಿ ಇಳಿಕೆಯಾಗಿದ್ದು, ಈಗ ಅದು 1,59,170 ರೂಪಾಯಿಗೆ ತಲುಪಿದೆ. ಅದೇ ಸಮಯದಲ್ಲಿ 1 ಗ್ರಾಂ ಚಿನ್ನದ ಬೆಲೆ 49 ರೂಪಾಯಿ ಇಳಿದು 15,917 ರೂಪಾಯಿಯಾಗಿದೆ.

22 ಕ್ಯಾರೆಟ್ ಚಿನ್ನದ ದರದಲ್ಲೂ ಕುಸಿತ ಕಂಡುಬಂದಿದ್ದು, 1 ಗ್ರಾಂ ಬೆಲೆ 45 ರೂಪಾಯಿ ಇಳಿದು 14,590 ರೂಪಾಯಿಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಸುಮಾರು 150 ರೂಪಾಯಿ ಇಳಿಕೆಯಾಗಿದ್ದು, ಈಗ ಅದು 1,45,900 ರೂಪಾಯಿಗೆ ತಲುಪಿದೆ

ಬೆಳ್ಳಿ ದರದಲ್ಲೂ ಕುಸಿತ

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಇಂದಿನ ವಹಿವಾಟಿನಲ್ಲಿ ಬೆಳ್ಳಿ ದರದಲ್ಲಿ ಸುಮಾರು 5,000 ರೂಪಾಯಿ ಕುಸಿತವಾಗಿದ್ದು, ಪ್ರತಿ ಕೆಜಿಗೆ 2,70,000 ರೂಪಾಯಿಗೆ ಇಳಿದಿದೆ.

ಚಿನ್ನ ಬೆಲೆ ಇಳಿಕೆಗೆ ಕಾರಣವೇನು?

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ, ಡಾಲರ್ ಮೌಲ್ಯದ ಏರಿಳಿತ ಹಾಗೂ ಕಚ್ಚಾ ತೈಲ ಬೆಲೆಯಲ್ಲಿ ಉಂಟಾದ ಏರಿಕೆಯಿಂದ ಹಣಕಾಸು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರುಪೇರು ಕಾಣುತ್ತಿದೆ.
ಇದರ ಜೊತೆಗೆ ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಹಲವು ಜಾಗತಿಕ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕಡಿಮೆಯಾಗಿದೆ ಎಂಬ ನಿರೀಕ್ಷೆಯೂ ಮಾರುಕಟ್ಟೆಗೆ ಪರಿಣಾಮ ಬೀರಿದೆ.

ಮುಂದಿನ ದಿನಗಳಲ್ಲಿ ಚಿನ್ನದ ದರ ಏನಾಗಬಹುದು

ತಜ್ಞರ ಪ್ರಕಾರ, ಯುದ್ಧ ಪರಿಸ್ಥಿತಿ ಮುಂದುವರಿದರೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದರೆ ಚಿನ್ನದ ಬೆಲೆಗಳಲ್ಲಿ ಇನ್ನಷ್ಟು ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಚಾಯ್ಸ್ ಬ್ರೋಕಿಂಗ್ ಸಂಸ್ಥೆಯ ಕಮಾಡಿಟಿ ವಿಶ್ಲೇಷಕ ಆಮೀರ್ ಮಕ್ದಾ ಅವರ ಪ್ರಕಾರ, ಬೆಲೆ ಏರಿಕೆಯಾದಾಗ ಮಾರಾಟ ಮಾಡುವ ತಂತ್ರವನ್ನು ವ್ಯಾಪಾರಿಗಳು ಅನುಸರಿಸಬಹುದು ಎಂದು ಸಲಹೆ ನೀಡಿದ್ದಾರೆ.

Leave a Comment